ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಕರ್ನಾಟಕದ ೨೮ ಲೋಕಸಭಾ(ಸಂಸತ್ತಿನ ಕೆಳಮನೆ) ಕ್ಷೇತ್ರಗಲ್ಲಿ ಒಂದು. 2002 ರಲ್ಲಿ ಡೆಲಿಮಿಟೇಷನ್ ಕಮಿಷನ್ ಆಫ್ ಇಂಡಿಯಾ ಶಿಫಾರಸಿನ ಆಧಾರವಾಗಿ, 2008 ರಲ್ಲಿ ಸಂಸಧೀಯ ಕ್ಷೇತ್ರದ ವಿಂಗಡಣೆಯ ಅನುಷ್ಠಾನದ ಭಾಗವಾಗಿ ಈ ಕ್ಷೇತ್ರವನ್ನು ರಚಿಸಲಾಯಿತು. ೨೦೦೯ರ ಮೊದಲ ಚುನಾವಣೆಯಲ್ಲಿ ಭಾಜಪ ಪಕ್ಷದಿಂದ ಡಿ.ವಿ.ಸದಾನಂದ ಗೌಡರು ಸಂಸದರಾದರು. ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣದಿಂದ , ೪ ಆಗಸ್ಟ್ ೨೦೧೧ ರಂದು ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆದ ಕಾರಣದಿಂದ ಡಿವಿಎಸ್, ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು ಹಾಗು ೨೦೧೨ರಲ್ಲಿ ಈ ಕ್ಶೇತ್ರಕ್ಕೆ ಉಪಚುನಾವಣೆಯನ್ನು ನಡೆಸಲಾಯಿತು. ಉಪಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಕೆ.ಜಯಪ್ರಕಾಶ್ ಹೆಗ್ಡೆ ಜಯಗಳಿಸಿದರು. 2014 ರ ಚುನಾವಣೆಯಲ್ಲಿ , ಬಿಜೆಪಿಯ ಶೋಭಾ ಕರಂದ್ಲಾಜೆ ಗೆದ್ದು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. == ಕ್ಷೇತ್ರ ವಿಭಾಗಗಳು == 2014 ರ ಪ್ರಕಾರ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಎಂಟು ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿದೆ: ಚಿಕ್ಕಮಗಳೂರು ಕಾಪು ಕಾರ್ಕಳ ಕುಂದಾಪುರ ಮೂಡಿಗೆರೆ ( ಪ.ಜಾ) ಶೃಂಗೇರಿ ತರಿಕೆರೆ ಉಡುಪಿ ನಾಲ್ಕು ವಿಧಾನಾಸಭಾ ಕ್ಷೇತ್ರಗಳು: ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಮತ್ತು ತರೀಕೆರೆ - ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.ಇನ್ನುಳಿದ ನಾಲ್ಕು : ಕುಂದಾಪುರ ,ಉಡುಪಿ, ಕಾಪು ಮತ್ತು ಕಾರ್ಕಳ - ಉಡುಪಿ ಜಿಲ್ಲೆಯಲ್ಲಿದೆ. == ಸಂಸತ್ತಿನ ಸದಸ್ಯರು == 2008ರಲ್ಲಿ ರಚನೆ 2009: ಡಿ.ವಿ.ಸದಾನಂದ ಗೌಡ, ಭಾರತೀಯ ಜನತಾ ಪಕ್ಷ 2012 (ಉಪ ಚುನಾವಣೆ): ಕೆ. ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್ 2014: ಶೋಭಾ ಕರಂದ್ಲಾಜೆ, ಭಾರತೀಯ ಜನತಾ ಪಕ್ಷ == ಚುನಾವಣಾ ಫಲಿತಾಂಶಗಳು == === ಸಾರ್ವತ್ರಿಕ ಚುನಾವಣೆ 2009 === === 2012 ರ ಚುನಾವಣೆ === === ಸಾರ್ವತ್ರಿಕ ಚುನಾವಣೆ 2014 === == ಇದನ್ನು ಸಹ ನೋಡಿ == ಉಡುಪಿ (ಲೋಕಸಭಾ ಕ್ಷೇತ್ರ) == ಉಲ್ಲೇಖಗಳು ==